ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಪಾದಕಮಲಗಳಲ್ಲಿ ತುಳಸೀ ದಳ ಸಮರ್ಪಣೆಗೆ ಸದವಕಾಶ - Donate Now

Articles/ ಸರ್ವಮೂಲದರ್ಶಿನೀ-೨

last year

ಶ್ರೀಗುರುಭ್ಯೋ ನಮ:

ಲೇಖನದ ವಿಷಯ

ಶ್ರೀಮದಾಚಾರ್ಯರು ರಚಿಸಿದ ಗ್ರಂಥಗಳನ್ನು “ಸರ್ವಮೂಲ” ಎಂದು ಕರೆಯಲು ಏನು ಕಾರಣ? 
ಅದರ ಅರ್ಥವೇನು? ಇದರ ಬಗ್ಗೆ ಅತ್ಯುತ್ತಮ ಅನುಸಂಧಾನಗಳನ್ನು ಒಳಗೊಂಡ ಅಪೂರ್ವವಿಷಯಗಳು ಇಲ್ಲಿವೆ.

ಶ್ರೀಮದಾಚಾರ್ಯರು ರಚಿಸಿದ ಗ್ರಂಥಗಳನ್ನು ಸರ್ವಮೂಲ ಎಂದು ಕರೆಯಲು ಏನು ಕಾರಣ?

ಶ್ರೀಮದಾಚಾರ್ಯರು ರಚಿಸಿದ ಗ್ರಂಥಗಳನ್ನು ‘ಸರ್ವಮೂಲ’ ಎಂದು ಕರೆಯಲು, ಈ ಆರು ಅರ್ಥಗಳನ್ನು ಕಾರಣಗಳನ್ನಾಗಿ ಚಿಂತಿಸಬಹುದು. (ಇನ್ನು ಹಲವಾರು ಸ್ವರಸವಾದ ಅರ್ಥಗಳು ಇರುತ್ತವೆ. ಕೆಲವನ್ನು ಮಾತ್ರ ಇಲ್ಲಿ ಹೇಳಲಾಗಿದೆ.)

೧) ಸರ್ವಾಣಿ (ವೇದಾದೀನಿ) ಮೂಲಾನಿ ಯೇಷಾಂ ತೇ ಸರ್ವಮೂಲಾ: ಎಲ್ಲಾ ಮೂಲ ಗ್ರಂಥಗಳ, ಅಂದರೆ ವೇದ, ಮಹಾಭಾರತ, ಪುರಾಣ, ಪಂಚರಾತ್ರ, ಇತ್ಯಾದಿ ಅನೇಕ ಗ್ರಂಥಗಳ ಆಧಾರದಲ್ಲಿ ನಿರ್ಮಿತ-ವಾಗಿರುವ ಗ್ರಂಥಗಳು. ಆದ್ದರಿಂದ ಸರ್ವಮೂಲಗಳು. 

೨) ಸರ್ವೇಷಾಂ (ಟೀಕಾದೀನಾಂ) ಮೂಲಭೂತಾ: ಗ್ರಂಥಾ: ಅಂದರೆ ಎಲ್ಲಾ ಗ್ರಂಥಗಳಿಗೂ ಆಧಾರ-ವಾಗಿರುವ ಗ್ರಂಥಗಳು. ವಿಷ್ಣುತೀರ್ಥರು ಪದ್ಮನಾಭ-ತೀರ್ಥರು, ತ್ರಿವಿಕ್ರಮಪಂಡಿತಾಚಾರ್ಯರು ನಾರಾ-ಯಣಪಂಡಿತಾಚಾರ್ಯರು, ಶ್ರೀಮಟ್ಟೀಕಾಕೃತ್ಪಾದರು, ಚಂದ್ರಿಕಾಚಾರ್ಯರೇ ಮೊದಲಾದ ಸಮಸ್ತಜ್ಞಾನಿಗಳು ರಚಿಸಿರುವ ಗ್ರಂಥಗಳಿಗೆ ಆಧಾರವಾಗಿರುವ ಗ್ರಂಥಗಳು. ಆದ್ದರಿಂದ ಸರ್ವಮೂಲ ಗ್ರಂಥಗಳು.

೩) ಸರ್ವೇಷಾಂ (ತತ್ವಾನಾಂ) ಮೂಲಭೂತಾ: (ಜ್ಞಾನಕಾರಣೀಭೂತಾ:) ಗ್ರಂಥಾ: ಅಂದರೆ ತತ್ವಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಿಗೂ ಮೂಲವಾದ ಅಂದರೆ ಆ ವಿಷಯಗಳನ್ನು ತಿಳಿಸುವ ಗ್ರಂಥಗಳು. ಆದ್ದರಿಂದ ಸರ್ವಮೂಲಗ್ರಂಥಗಳು. 

೪) ಸರ್ವೇಷಾಂ (ಜೀವಾನಾಂ ವಿಶೇಷತಃ ಸಜ್ಜ-ನಾನಾಂ) ಮೂಲಭೂತಾ: (ಸ್ವಸ್ವರೂಪಯಥಾರ್ಥ-ಜ್ಞಾನಪ್ರದಾ:) ಗ್ರಂಥಾ: ಅಂದರೆ ಎಲ್ಲಾ ಜೀವರಾಶಿ-ಗಳಿಗೂ ವಿಶೇಷವಾಗಿ ಸಜ್ಜನರಿಗೆ ಆಧಾರವಾಗಿರುವ, ಅಂದರೆ ತತ್ವಜ್ಞಾನವನ್ನು ನೀಡಿ ರಕ್ಷಿಸುವ ಗ್ರಂಥಗಳು. ಆದ್ದರಿಂದ ಸರ್ವಮೂಲಗ್ರಂಥಗಳು.

೫) ಸರ್ವ: ಮೂಲಂ ಯೇಷಾಂ ತೇ ಸರ್ವಮೂಲಾ: ಗ್ರಂಥಾ: ‘ಸರ್ವ’ ಎಂಬ ಶಬ್ದದಿಂದ ವಾಚ್ಯನಾದ ಭಗವಂತನೇ ಮೂಲವಾಗಿವುಳ್ಳ ಗ್ರಂಥಗಳು. ಅಂದರೆ ಈ ಗ್ರಂಥಕ್ಕೆ ಎಲ್ಲಾ ರೀತಿಯಿಂದಲೂ ಮೂಲ-ವಾಗಿರುವುದು, ಆಧಾರವಾಗಿರುವುದು ಭಗವಂತನೇ.  ಪ್ರತಿಪಾದ್ಯನಾಗಿ, ಗ್ರಂಥಕರ್ತೃಪ್ರೇರಕನಾಗಿ, ಬಾಹ್ಯ-ವಾಗಿಯೂ ಸೂತ್ರಭಾಷ್ಯಾದಿಗ್ರಂಥಗಳ ರಚನೆಗೆ ಪ್ರೇರಣೆಯನ್ನು ನೀಡುವವನು. ಹೀಗೆ ಅನೇಕರೀತಿಯಲ್ಲಿ ಪರಮಾತ್ಮನೇ ಇವುಗಳಿಗೆ ಮೂಲ. ಆದ್ದರಿಂದ ಇವು ಸರ್ವಮೂಲಗ್ರಂಥಗಳು. 

೬) ಸರ್ವಸ್ಯ (ಪೂರ್ಣಸ್ಯ ಮೋಕ್ಷಸ್ಯ) ಮೂಲಭೂತಾ: (ಕಾರಣೀಭೂತಾ:) ಗ್ರಂಥಾ: ಅಂದರೆ ಪ್ರತಿಯೊಬ್ಬ ಸಾಧಕನಿಗೂ ಯಥಾಯೋಗ್ಯವಾಗಿ ಪರಿಪೂರ್ಣವಾದ ಮೋಕ್ಷವನ್ನು ತಿಳಿಸಿಕೊಟ್ಟು, ಮೋಕ್ಷವನ್ನು ಕೊಡುವ ಗ್ರಂಥಗಳು. ಆದ್ದರಿಂದ ಇವು ಸರ್ವಮೂಲ ಗ್ರಂಥಗಳು.

      ಹೀಗೆ ಸರ್ವವಿಧದಿಂದಲೂ ಭಗವಂತನನ್ನೇ ಮೂಲವನ್ನಾಗಿ ಪಡೆದ, ಎಲ್ಲಾ ಮೂಲಗ್ರಂಥಗಳನ್ನೂ ಮೂಲವನ್ನಾಗಿ ಪಡೆದ, ಎಲ್ಲಾ ಟೀಕೆ-ಟಿಪ್ಪಣಿಗಳಿಗೂ ಮೂಲವಾಗಿರುವ, ಸರ್ವಪ್ರಮೇಯಗಳನ್ನು ತಿಳಿಸಿ-ಕೊಡುವ, ಸರ್ವಸಜ್ಜನರಿಗೆ ಹಿತೈಷಿಯಾದ, ಪರಮ-ಸುಖಮಯಮೋಕ್ಷವನ್ನೇ ನೀಡುವ  ಸರ್ವಮೂಲಗ್ರಂ-ಥಗಳನ್ನು ಓದಿ, ಅಲ್ಲಿ ಹೇಳಿದ ವಿಷಯವನ್ನು ತಿಳಿದು, ಯಾರು ತಮ್ಮ ಜೀವನದಲ್ಲಿ  ಅಳವಡಿಸಿಕೊಳ್ಳು-ತ್ತಾರೋ, ಅವರ ಜೀವನವೇ ನಿಜವಾಗಿ ಧನ್ಯ. ಗುರುಗಳು, ಆಚಾರ್ಯರು, ವೇದವ್ಯಾಸದೇವರು ಆ ಸೌಭಾಗ್ಯವನ್ನು ನಮಗೆ ನೀಡಲಿ ಎಂದು ಪ್ರಾರ್ಥಿಸೋಣ.

ಶ್ರೀಕೃಷ್ಣಾರ್ಪಣಮಸ್ತು

Sri Uttaradi Math Apps

Sri Uttaradi Math

Sri Uttaradi Math

VVS Matrimony

VVS Matrimony

UM Stotra

UM Stotra

Satyatma Vani

Satyatma Vani

Sandhyavandanam

Sandhyavandanam